ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಹಳೆಯ ತಂಡವಾಗಿ, 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ತಂಡವು ಏಕದಿನ ಅಂತರರಾಷ್ಟ್ರೀಯ () ಮತ್ತು ಟ್ವೆಂಟಿ 20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಅನ್ನು ಸಹ ಆಡುತ್ತದೆ, ಮೊಟ್ಟ​ ಮೊದಲ , ಇಂಗ್ಲೆಂಡ್ ವಿರುದ್ಧ ಮತ್ತು ಮೊಟ್ಟ​ ಮೊದಲ T20I, ನ್ಯೂ ಜೀಲ್ಯಾಂಡ್ ವಿರುದ್ಧ ಆಡಿತ್ತು. ಆಸ್ಟ್ರೇಲಿಯಾ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವೆಂದು ಪರಿಗಣಿಸಲಾಗಿದೆ. ಟೆಸ್ಟ್ ಪೈಪೋಟಿಗಳಲ್ಲಿ ಆಶಸ್ (ಇಂಗ್ಲೆಂಡ್ ಜೊತೆ), ಬಾರ್ಡರ್-ಗವಾಸ್ಕರ್ ಟ್ರೋಫಿ (ಭಾರತದೊಂದಿಗೆ), ಫ್ರಾಂಕ್ ವೊರೆಲ್ ಟ್ರೋಫಿ (ವೆಸ್ಟ್ ಇಂಡೀಸ್‌ನೊಂದಿಗೆ), ಟ್ರಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್‌ನೊಂದಿಗೆ) ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿವೆ. 12 ಜನವರಿ 2019 ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ವಿರುದ್ಧದ ಮೊದಲ ಅನ್ನು ಆಸ್ಟ್ರೇಲಿಯಾ 34 ರನ್‌ಗಳಿಂದ ಗೆದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 1,000 ನೇ ಗೆಲುವನ್ನು ದಾಖಲಿಸಿತು. == ಪ್ರಸ್ತುತ ತಂಡ == ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ. == ಪಂದ್ಯಾವಳಿಯ ಇತಿಹಾಸ == === ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ === === ಕ್ರಿಕೆಟ್ ವಿಶ್ವ ಕಪ್ === === ಟಿ20 ವಿಶ್ವಕಪ್ === == ಉಲ್ಲೇಖಗಳು ==